
ಮೆಣಸಿನಕಾಯಿ ತಿಂದೊಡನೆ ಕಣ್ಣಲ್ಲಿ ನೀರು, ಖಾರದ ಉರಿಗೆ ಇಡೀ ಮಯ್ಯಿ ತತ್ತರಿಸಿದಾಗ ಮೆಣಸಿನಕಾಯಿ ಖಾರ-ಬೆಂಕಿ, ‘ಇಷ್ಟು’ ಖಾರ ಯಾರಾದರೂ ತಿನ್ನುತ್ತಾರಾ ಅನ್ನುವ ಮಾತುಗಳು ಹೊರಬರುತ್ತವೆ.’ತುಂಬಾ’ ಖಾರ, ‘ಕಡಿಮೆ’ ಖಾರ ಅನ್ನುವ ಅನಿಸಿಕೆ ಒಬ್ಬರಿಂದ ಇನ್ನೊಬ್ಬರಿಗೆ ಬೇರೆ ಬೇರೆಯಾಗಿರುತ್ತದೆ. ಅನಿಸಿಕೆಯ ಈ ಬೇರೆತನವನ್ನು ಹೋಗಲಾಡಿಸಲು ಒಂದೇ ತರನಾಗಿರುವ ‘ಅಳತೆಗೋಲು’ ಬೇಕಲ್ಲವೇ ? ಆ ಅಳತೆಗೋಲಿನ ಬಗ್ಗೆ ಈಗ ತಿಳಿದುಕೊಳ್ಳೋಣ.
ಸ್ಕಾವಿಲ್ (Scoville) ಎಂಬ ಅಳತೆಗೋಲು ಬಳಸಿ, ಮಸಾಲೆಯೊಂದು ‘ಎಷ್ಟು’ ಖಾರವಾಗಿದೆ ಅನ್ನುವುದನ್ನು ಅಳೆಯಲಾಗುತ್ತದೆ.
ಈ ಅಳತೆಗೋಲು ಕಂಡುಹಿಡಿದ ವಿಲ್ಬರ್ ಸ್ಕಾವಿಲ್ (Wilbur Scoville) ಅವರ ಹೆಸರಿನಿಂದಲೇ ಇದನ್ನು ಗುರುತಿಸಲಾಗುತ್ತದೆ. ಮೆಣಸಿನಕಾಯಿ, ಮೆಣಸು ಮುಂತಾದ ಮಸಾಲೆಗಳ ಖಾರದ ಚುರುಕಿನ ಮಟ್ಟ ಆ ವಸ್ತುಗಳಲ್ಲಿ ಕಾಪಾಸಿಸಿಯನ್ (capsaicin) ಎಂಬ ವಸ್ತು ಎಷ್ಟಿದೆ ಅನ್ನುವುದರ ಮೇಲೆ ತೀರ್ಮಾನವಾಗುತ್ತದೆ.
ಕಾಪಾಸಿಸಿಯನ್ (capsaicin) ತೊಗಲಿನಲ್ಲಿರುವ ನರಗಳಿಗೆ ಖಾರದ ಚುರುಕು ತಾಕಿಸುವಂತ ಅಡಕವಾಗಿರುವ ವಸ್ತು (chemical compound), ಇದರಿಂದಾಗಿಯೇ ನಮಗೆ ಖಾರದ ಅನುಭವವಾಗುತ್ತದೆ.
‘ವಿಲ್’ ಅಳತೆಯಂತೆ ಬೇರೆ-ಬೇರೆ ಮಸಾಲೆಗಳ ‘ಖಾರದ ಮಟ್ಟ’ ಹೀಗಿದೆ:
ಬ್ಯಾಡಗಿ ಮೆಣಸಿನಕಾಯಿ ‘ಎಷ್ಟು’ ಖಾರ ಅಂತಾ ಈಗ ಗೊತ್ತಾಯಿತಲ್ಲ! ಇನ್ನು ಜಗತ್ತಿನಲ್ಲಿಯೇ ಎಲ್ಲಕ್ಕಿಂತ ಖಾರವಾದ ‘ ಟ್ರೆನಿಡಾಡ್ ಮೊರುಗಾ ಸ್ಕಾರ್ಪಿಯನ್’ ಮೆಣಸಿನ ತಂಟೆಗೆ ಹೋಗದಿರುವುದೇ ವಾಸಿ ಅನಿಸುತ್ತದೆ!
(ತಿಳಿವಿನ ಸೆಲೆ: vox,downtoearth,pixels.com)